ಹೊಸದಿಲ್ಲಿ, ಸೆ.28: ಆರ್ಯ-ದ್ರಾವಿಡ ಜನಾಂಗ ವಾದವನ್ನು ತಳ್ಳಿ ಹಾಕಿರುವ ಇತ್ತೀಚಿನ ಜನಾಂUಯ ಅಧ್ಯಯನವು ವಿವಾಹಗಳಲ್ಲಿ ಜಾತಿ ವಿಭಜನೆಯನ್ನು ಸ್ಥಾಪಿಸಿದ್ದರೆ, ಜಾತಿ ಆಧಾರಿತ ತಾರತಮ್ಯವನ್ನು ಮಾನವ ಹಕ್ಕು ಉಲ್ಲಂಘನೆಯೆಂದು ಪರಿಗಣಿಸಲು ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಸಮ್ಮೇಳನ ಚಿಂತನೆ ನಡೆಸಿದೆ.
ಇದನ್ನು ಭಾರತ ವಿರೋಧಿಸಿದ್ದರೆ, ಈ ಸಾಂಸ್ಕೃತಿಕ ಸೂಕ್ಷ್ಮ ವಿಚಾರವನ್ನು ನೇಪಾಳ ಬೆಂಬಲಿಸಿದೆ.
ನೇಪಾಳದಲ್ಲಿ ಅಸ್ಪಶ್ಯತೆಯನ್ನು ಪಾರಂಪರಿಕವಾಗಿ ಆಚರಿಸಿಕೊಂಡು ಬರಲಾಗಿದೆಯಾದರೂ, ವಿಶ್ವಸಂಸ್ಥೆ ವ್ಯಾಖ್ಯಾನಿಸಿರುವ ಜಾತಿ ತಾರತಮ್ಯ-ಕುಲ ಹಾಗೂ ಕಸಬು ಆಧಾರಿತ ತಾರತಮ್ಯವನ್ನು-ಪರಿಣಾಮಕಾರಿಯಾಗಿ ನಿವಾರಿಸಲು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯು ನಾಲ್ಕು ತಿಂಗಳ ಹಿಂದೆಯೇ ಪ್ರಕಟಿಸಿರುವ ಕರಡು ಸಿದ್ಧಾಂತ ಹಾಗೂ ಮಾರ್ಗಸೂಚಿಗೆ ಅದು ಬೆಂಬಲ ಘೋಷಿಸಿದೆ.
ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳು ಮುಂದಿರಿಸಿರುವ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ತನ್ನ ದೇಶವು ಸ್ವಾಗತಿಸುವುದಾಗಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಸೆ.೧೬ರಂದು ನಡೆದ ಸಮ್ಮೇಳನದ ಕಲಾಪವೊಂದರಲ್ಲೇ ಹೇಳಿದ್ದರು.
ಭಾರತವು ಇದು ಜಾತೀಯತೆಯನ್ನು ಜಾಗತೀಕರಿಸುವ ಕ್ರಮವೆಂದು ಟೀಕಿಸಿದೆ.
ಆದರೆ, ಭಾರತಕ್ಕೆ ಮುಜುಗರ ಮೂಡಿಸುವಂತಹ ಕ್ರಮವೊಂದರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕು ರಾಯಭಾರಿ, ದಕ್ಷಿಣ ಆಫ್ರಿಕದ ತಮಿಳ, ನವನೇತಃ ಪಿಳ್ಳೆ, ನೇಪಾಳದ ಈ ಹೇಳಿಕೆಯನ್ನು ತಕ್ಷಣ ಬೆಂಬಲಿಸಿದ್ದಾರೆ.
ಇದು ಜಾತೀಯತೆಯ ಸಮಸ್ಯೆಯಿಂದ ನಲುಗಿರುವ ದೇಶವೊಂದರ ಮಹತ್ವದ ಹೆಜ್ಜೆಯೆಂದು ವ್ಯಾಖ್ಯಾನಿಸಿರುವ ಅವರು, ಈ ಶ್ಲಾಘನೀಯ ಉದಾಹರಣೆಯನ್ನು ಇತರ ದೇಶಗಳೂ ಅನುಸರಿಸುವಂತೆ ಪ್ರೋತ್ಸಾಹ ನೀಡಬಯಸುವುದಾಗಿ ಹೇಳಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಹೊಸದಿಲ್ಲಿಗೆ ಭೇಟಿ ನೀಡಿದ್ದ ಪಿಳ್ಳೆ, ಈ ರಾಷ್ಟ್ರೀಯ ಸಮಸ್ಯೆಯನ್ನು ಪರಿಹರಿಸುವುದು ಮಾತ್ರವಲ್ಲದೆ, ಜಾತಿ ತಾರತಮ್ಯದ ವಿರುದ್ಧದ ಜಾಗತಿಕ ಹೋರಾಟದ ನಾಯಕತ್ವ ವಹಿಸುವಂತೆಯೂ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.
ಮಧುರೈಯ ಹಳ್ಳಿಯೊಂದರಿಂದ ಜೀತದಾಳಾಗಿ ದಕ್ಷಿಣ ಆಫ್ರಿಕಕ್ಕೆ ಒಯ್ಯಲ್ಪಟ್ಟಿದ್ದ ವ್ಯಕ್ತಿಯೊಬ್ಬನ ಮಗಳಾಗಿರುವ ಪಿಳ್ಳೆ, ೨೦೦೬ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅಸ್ಪಶ್ಯತೆಯನ್ನು ವರ್ಣದ್ವೇಶಕ್ಕೆ ಹೋಲಿಸಿದ್ದುದನ್ನು ಸ್ಮರಿಸಿದ್ದಾರೆ.
ಐರೋಪ್ಯ ಒಕ್ಕೂಟದ ಅಧ್ಯಕ್ಷನ ನೆಲೆಯಲ್ಲಿ ಸ್ವೀಡನ್ ಸಹ, ಜಾತಿ ತಾರತಮ್ಯ ಅಥವಾ ವೃತ್ತಿ ಮತ್ತು ಜನಾಂಗ ಆಧಾರಿತ ತಾರತಮ್ಯವನ್ನು ಐರೋಪ್ಯ ಒಕ್ಕೂಟವು ಆದ್ಯತೆಯ ನೆಲೆಯಲ್ಲಿ ಪರಿಶೀಲಿಸುವುದಾಗಿ ಹೇಳಿದೆ.
ಈ ವಿಚಾರವು ಇನ್ನಷ್ಟು ವೇಗವನ್ನು ಪಡೆದರೆ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯು ಕರಡು ಸಿದ್ಧಾಂತ ಹಾಗೂ ಮಾರ್ಗಸೂಚಿ ಸಿದ್ಧಪಡಿಸಿ, ಅದಕ್ಕೆ ಹೆಚ್ಚಿನ ಕಾನೂನು ಬಲವನ್ನು ನೀಡಲು ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಂಜೂರಾತಿಗಾಗಿ ಮುಂದಿನ ಸಮ್ಮೇಳನದ ವೇಳೆ ಕಳುಹಿಸಿ ಕೊಡಬಹುದು.
ವಿಶ್ವದ ೨೦ ಕೋಟಿಗು ಹೆಚ್ಚು ಜನರು ತಾರತಮ್ಯದಿಂದ ಬಳಲುತ್ತಿರುವುದಕ್ಕೆ ಜಾತೀಯತೆಯೇ ಮುಖ್ಯ ಕಾರಣವೆಂದು ಕರಡು ಸಿದ್ಧಾಂತವು ಪ್ರಧಾನವಾಗಿ ಉಲ್ಲೇಖಿಸಿದೆ. ಈ ರೀತಿಯ ತಾರತಮ್ಯವು ಸ್ವಚ್ಛತೆ, ಮಾಲಿನ್ಯ ಹಾಗೂ ಅಸ್ಪಶತೆಯ ಆಚರಣೆಯೊಂದಿಗೆ ಮೂಲ ಸಂಬಂಧ ಹೊಂದಿದ್ದು, ಸಮಾಜ ಹಾಗೂ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆಯೆಂದು ಅದು ಹೇಳಿದೆ.
೨೦೦೧ರಲ್ಲಿ ಡರ್ಬಾನ್‌ನಲ್ಲಿ ನಡೆದಿದ್ದ ಜನಾಂUಯ ವಾದದ ಕುರಿತಾದ ಸಮ್ಮೇಳನದಲ್ಲಿ ಮಂಡಿಸಲಾಗಿದ್ದ ನಿರ್ಣಯದಿಂದ ಜಾತಿಯ ವಿಷಯವನ್ನು ಹೊರಗಿಡುವ ಪ್ರಯತ್ನದಲ್ಲಿ ಭಾರತ ಸಫಲವಾಗಿದ್ದರೂ, ಈ ವಿಚಾರ ಚರ್ಚೆಗೆ ಬಾರದೆಂದೇ ಆ ಬಳಿಕ ಬೇರೆ ಕೂಪದಿಂದ ಮುನ್ನೆಲೆಗೆ ಬಂದಿತ್ತು